ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಪುಸ್ತಕಗಳು
Share
ಯಕ್ಷಗಾನ ಕವಿ ಚರಿತ್ರೆ : ಒಂದು ಮಹತ್ವಾಕಾಂಕ್ಷೆಯ ಪುಸ್ತಕ

ಲೇಖಕರು :
ಮುರಳೀಧರ ಉಪಾಧ್ಯ ಹಿರಿಯಡಕ
ಶುಕ್ರವಾರ, ಜನವರಿ 17 , 2014

ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ‘ಯಕ್ಷಗಾನ ಕವಿ ಚರಿತ್ರೆ’ ಒಂದು ಮಹತ್ವಾಕಾಂಕ್ಷೆಯ ಪುಸ್ತಕ. ಕುಂಬಳೆಯಿಂದ ಬೀದರ್‌ವರೆಗಿನ ಸುಮಾರು ೧೨೦೦ ಯಕ್ಷಗಾನ ಕವಿಗಳು ಇಲ್ಲಿ ಉಲ್ಲೇಖಗೊಂಡಿದ್ದಾರೆ. ಇವರಲ್ಲಿ 300 ಮಂದಿ ಅಜ್ಞಾತ ಕವಿಗಳು. ಈ ಕವಿಗಳು ರಚಿಸಿದ ಪ್ರಸಂಗಗಳ ಸಂಖ್ಯೆ ಸುಮಾರು 4600. ‘ಪ್ರತಿಯೊಂದು ಪ್ರಸಂಗದಲ್ಲಿ ೨೫೦ ಪದ್ಯಗಳಿವೆ ಎಂದು ಭಾವಿಸಿದರೂ, ಪದ್ಯಗಳ ಒಟ್ಟು ಸಂಖ್ಯೆ ಹತ್ತು ಲಕ್ಷ ದಾಟುತ್ತದೆ’.

ಲೇಖಕರು : ಡಾ. ಕಬ್ಬಿನಾಲೆ ವಸಂತ ಭಾರದ್ವಾಜ
ಪ್ರಕಾಶಕರು : ಯಕ್ಷಗಾನ ಕೇಂದ್ರ, ಎಂ.ಜಿ.ಎಂ ಕಾಲೇಜು, ಉಡುಪಿ-– 576102
ಯಕ್ಷಗಾನ ಕವಿ, ಪ್ರಸಂಗಗಳ ದಾಖಲೆ
ಪಡುವಲಪಾಯ, ದೊಡ್ಡಾಟ, ಸಣ್ಣಾಟ, ಪಾರಿಜಾತ- ಈ ಪ್ರಕಾರಗಳ ಕವಿಗಳನ್ನೂ ಇಲ್ಲಿ ಯಕ್ಷಗಾನ ಕವಿಗಳೆಂದೇ ಪರಿಗಣಿಸಲಾಗಿದೆ. ಲೇಖಕರು ಕೆಲವು ಮುಖ್ಯ ಪ್ರಸಂಗಗಳ ಒಂದೆರಡು ಪದ್ಯಗಳನ್ನೂ ಉದಾಹರಣೆಗಾಗಿ ನೀಡಿದ್ದಾರೆ. ಕ್ರಿ.ಶ. 1300–50ರ ಸುಮಾರಿಗೆ ಅಜ್ಞಾತ ಕವಿಯೊಬ್ಬ ಬರೆದ ‘ಆದಿ ಪರ್ವ’ವನ್ನು ಯಕ್ಷಗಾನದ ಪ್ರಾಚೀನ ಕೃತಿ ಎಂದು ಕಬ್ಬಿನಾಲೆಯವರು ಒಪ್ಪಿಕೊಂಡಿದ್ದಾರೆ. ಈ ಕುರಿತು ಡಾ. ಪ್ರಭಾಕರ ಜೋಶಿಯವರ ಭಿನ್ನಾಭಿಪ್ರಾಯವನ್ನು ಇಲ್ಲಿ ಅವರು ದಾಖಲಿಸಬೇಕಿತ್ತು. ಹಿಂದೂ, ಜೈನ, ಮುಸ್ಲಿಂ- ಹೀಗೆ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಕವಿಗಳು ಇಲ್ಲಿದ್ದಾರೆ. ಕಿಬ್ಬಚ್ಚಲ ಮಂಜಮ್ಮ, ಗಣಪಕ್ಕ ಸಣ್ಣಬಡ್ತಿ, ಮಹಾಲಕ್ಷ್ಮಿ ನಾಗಪ್ಪ ಜೋಯಿಸ ಇಂಥ ಕವಯಿತ್ರಿಯರೂ ಕಾಣಿಸುತ್ತಾರೆ.

ಹೊಸ್ತೋಟ ಮಂಜುನಾಥ ಭಾಗವತರು ಅತ್ಯಂತ ಹೆಚ್ಚಿನ ಪ್ರಸಂಗಗಳನ್ನು (215) ರಚಿಸಿದ ಕವಿ. ಅನಂತರಾಮ ಬಂಗಾಡಿಯವರು ನೂರಕ್ಕಿಂತ ಹೆಚ್ಚು ತುಳು ಪ್ರಸಂಗಗಳನ್ನು ಬರೆದಿದ್ದಾರೆ. ಸದಾಶಿವ ಭಟ್ ಒಂಬತ್ತು ಭಾಷೆಗಳಲ್ಲಿ ಪ್ರಸಂಗಗಳನ್ನು ಬರೆದಿರುವ ಕವಿ. ಯಕ್ಷಗಾನ ಕವಿಗಳು ಪುರಾಣಲೋಕದ ಗಡಿದಾಟಿ, ‘ಇಸ್ಪೀಟಾಟ’ ‘ಭಗವಾನ್ ಯೇಸು ಕ್ರಿಸ್ತ’, ‘ಸತ್ಯ ವಿಜಯ’, ‘ನಸ್ಸೇರ್ ವಿಜಯ’ ಅಫಜಲಖಾನ್ ವಧೆ’ ಇಂಥ ವಸ್ತುಗಳನ್ನು ಆಯ್ಕೆ ಮಾಡಿದ್ದಾರೆ. ಮುದ್ದಣನ ಹಾಗೆ ಕನ್ನಡ ಲೇಖಕರಾದ ಪಂಜೆ, ಮುಳಿಯ, ಪುತಿನ ಕೂಡ ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ.

ಪ್ರಸಂಗಗಳು ಪ್ರಕಟಿತವೇ, ಅಪ್ರಕಟಿತವೇ ಎಂದು ತಿಳಿಸದಿರುವುದು, ಪ್ರಕಟಣೆಯ ಮಾಹಿತಿ ನೀಡದಿರುವುದು ಈ ಗ್ರಂಥದ ಒಂದು ದೊಡ್ಡ ಕೊರತೆ. ನನ್ನ ಗುರುಗಳಾಗಿದ್ದ ಸೀತಾನದಿ ಗಣಪಯ್ಯ ಶೆಟ್ಟರು ‘ನಾವು ಯಕ್ಷಗಾನ ಪ್ರಸಂಗ ಬರೆದವರು ಕವಿಗಳಲ್ಲವೇ’ ಎಂದು ಪ್ರಶ್ನಿಸುತ್ತಿದ್ದರು. ಯಕ್ಷಗಾನ ‘ಕವಿಗಳ ಸಂದಣಿಗೆ ಬಲವಂದು’ ಅವರಿಗೆ ಸಾಹಿತ್ಯ ಚರಿತ್ರೆಯಲ್ಲಿ ಮನ್ನಣೆ ನೀಡಿರುವ ಡಾ. ಕಬ್ಬಿನಾಲೆಯವರು ಅಭಿನಂದನಾರ್ಹರು.





ಕೃಪೆ : http://prajavani.net


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ